ಮಂಗಳವಾರ, ಆಗಸ್ಟ್ 28, 2012

ಗರ್ವ

ಗರ್ವವೆಂದರೆ ಯಾವ ಅರ್ಥದಲ್ಲಿ ಗ್ರಹಿಸುತ್ತೀರಿ?  ನಮ್ಮೆಲ್ಲರ  ಮನಸ್ಸಿನಲ್ಲಿ  ಗರ್ವವೆಂದರೆ ತನ್ನನ್ನೇ

ಸರ್ವಶ್ರೇಷ್ಠ  ಎಂದು ಕೊಂಡವನು . ತನ್ನನ್ನು ಬಿಟ್ಟರಿನ್ನ್ಯಾರಿಲ್ಲ  ಎಂದುಕೊಂಡವನು . ಸರಿಯಾಗಿದೆ

ಶಬ್ದ ಅದನ್ನೇ ಧ್ವನಿಸುತ್ತಿದೆ. ನಿಗರ್ವಿಯಾಗೋಣ  ಎಲ್ಲ ಸಾತ್ವಿಕರ ಕರೆ. ಎನಗಿಂತ ಕಿರಿಯರಿಲ್ಲ ಎಂದರು

ಪೂಜ್ಯರು. ಚೋದ್ಯವೆಂದರೆ ಇದೇ . ಉನ್ನತಿಯತ್ತ ಸಾಗಿದವನು ನಿಗರ್ವಿ ಯಾಗುತ್ತ ನಡೆದರೆ  ಅಲ್ಪಮತಿ

ಗರ್ವಿಯಾಗುತ್ತ  ನಡೆಯುತ್ತಾನೆ. ನನ್ನನ್ನೇ  ಆರಾಧಿಸಬೇಕೆಂದವನು  ಮುಂದಕ್ಕೆ ಸಾಗಲಾರ . ಜನರು

ತನ್ನನ್ನು  ಗಮನಿಸುತ್ತಿದ್ದಾರೆಯೇ  ಎನ್ನುವ ವಿಚಾರದಲ್ಲಿಯೇ ಅವನ ಬೆಳವಣಿಗೆ ನಿಂತಿರುತ್ತದೆ.

ಈಗ ತುಸು ಚಿಂತಿಸಿ. ಗರ್ವವೆಂದರೆ  ನಾವು ತಿಳಿದುದಕ್ಕಿಂತಲೂ  ವಿಶಾಲವಾಗಿದೆ . ನನ್ನದೆನ್ನುವ ಎಲ್ಲವೂ

ಈ ಅರ್ಥದಲ್ಲಿಯೇ ಬರುತ್ತದೆ. ಮನುಷ್ಯನಾದವನು  ತನ್ನ ಸಾಧನೆಗಳನ್ನು ,ತನ್ನ ತಿಳಿವನ್ನು

ಜಗಕ್ಕೆಲ್ಲ  ಸಾರುತ್ತಿದ್ದರೆ  ಅದು ಗರ್ವ ಎನಿಸಲಾರದು. ಅದೊಂದು ಜ್ಞಾನದಾನ . ಮಾರ್ಗ ಧೀರ್ಘವಾಗಿದೆ.

ನಮ್ಮ ಮುಂದೆ ಸಾಗುತ್ತಲೇ ಇದ್ದಾರೆ.ನಾವು  ಕ್ರಮಿಸುವುದು  ನಮ್ಮಳವಿಗೆ ಸಿಕ್ಕಿಲ್ಲ. ಎಲ್ಲಿಯವರೆಗೆ ನಮ್ಮ

ಮುಂದೆ ಸಾಗಿದವರಿದ್ದಾರೋ ಅಲ್ಲಿಯವರೆಗೆ ನಾವು ಅಲ್ಪರೆ. ಅಂದರೆ ಗರ್ವಕ್ಕೆ ಸ್ಥಾನವೆಲ್ಲಿ?

ಶತಮಾನಗಳು ಕಲಿತರು ಉಂಟು ವಿದ್ಯೆಗೆ ಕೊನೆಯೆಲ್ಲಿ?   ಹಿಮಾಲಯವನ್ನೇರಿ  ನೋಡಿ,ನಮ್ಮ ಮುಂದೆ

ಸಾವಿರಾರು ಹೆಜ್ಜೆ ಗುರಿತಿರುತ್ತದೆ.

ಗರ್ವ ಬಿಡೋಣ. ಕಿರಿಯರು ನಾವೆಲ್ಲ.

ಆತ್ಮಗೌರವವಿರಲಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನನ್ನ ಬ್ಲಾಗ್ ಪಟ್ಟಿ