ದುಮ್ಮಿಕ್ಕುವ ಜಲಧಾರೆಯಲ್ಲಿ ನಿಂತು,
ಮುಗಿಲತ್ತ ದೃಷ್ಟಿಸಿದಾಗ
ಕಣ್ಣ ತುಂಬಾ ಮುಗಿಲ ಮಿಂಚು.
ಅದೋ ಅಲ್ಲಿ ಜ್ವಲಿಸುವ ಸೂರ್ಯ,
ಬಾನೆತ್ತರದ ಅಗ್ನಿ ಬಿಂಬ .
ಸುರಿವ ಕೆಂಡ, ಮತ್ತೆ ಪ್ರಜ್ವಲಿಸುವ
ಸೂರ್ಯಕಾಂತಿ.
ಅಲ್ಲಿಯೇ ನಿಂತು ಮೊಗೆದು ಕುಡಿದ ಜಲ
ನನ್ನಾಳದಲ್ಲಿ ಇಂಗಿಹೊಯಿತಲ್ಲ!
ಬಿನ್ನಾಣದ ಸೃಷ್ಟಿ,
ಲಯದ ಸ್ವಪ್ನದ ಕನವರಿಕೆಯಲ್ಲಿ,
ನನ್ನದೆನ್ನದ ಮೋಹದ ಹುಚ್ಚು ಹೊಳೆ ,
ಅಲ್ಲಿಯೇ ಐಕ್ಯವಾಯಿತೆ ಜಲ?
ಬನ್ನಿ ಬಂಗಾರವ ಬೆಳೆಯೋಣ ,
ಬಂಗಾರವನ್ನೇ ಬಿತ್ತೋಣ .
ಜಗದಗಲ ಮುಗಿಲಗಲ ,
ಸರ್ವ ಸಮಷ್ಟಿಯ ಪಾಲಾಗೋಣ.
ಅದೇ ಜಲ ,ನೆಲ,ಮುಗಿಲು,
ಮತ್ತೆಲ್ಲಿಯ ಭ್ರಾಂತಿ?
ಮುಗಿಲತ್ತ ದೃಷ್ಟಿಸಿದಾಗ
ಕಣ್ಣ ತುಂಬಾ ಮುಗಿಲ ಮಿಂಚು.
ಅದೋ ಅಲ್ಲಿ ಜ್ವಲಿಸುವ ಸೂರ್ಯ,
ಬಾನೆತ್ತರದ ಅಗ್ನಿ ಬಿಂಬ .
ಸುರಿವ ಕೆಂಡ, ಮತ್ತೆ ಪ್ರಜ್ವಲಿಸುವ
ಸೂರ್ಯಕಾಂತಿ.
ಅಲ್ಲಿಯೇ ನಿಂತು ಮೊಗೆದು ಕುಡಿದ ಜಲ
ನನ್ನಾಳದಲ್ಲಿ ಇಂಗಿಹೊಯಿತಲ್ಲ!
ಬಿನ್ನಾಣದ ಸೃಷ್ಟಿ,
ಲಯದ ಸ್ವಪ್ನದ ಕನವರಿಕೆಯಲ್ಲಿ,
ನನ್ನದೆನ್ನದ ಮೋಹದ ಹುಚ್ಚು ಹೊಳೆ ,
ಅಲ್ಲಿಯೇ ಐಕ್ಯವಾಯಿತೆ ಜಲ?
ಬನ್ನಿ ಬಂಗಾರವ ಬೆಳೆಯೋಣ ,
ಬಂಗಾರವನ್ನೇ ಬಿತ್ತೋಣ .
ಜಗದಗಲ ಮುಗಿಲಗಲ ,
ಸರ್ವ ಸಮಷ್ಟಿಯ ಪಾಲಾಗೋಣ.
ಅದೇ ಜಲ ,ನೆಲ,ಮುಗಿಲು,
ಮತ್ತೆಲ್ಲಿಯ ಭ್ರಾಂತಿ?